ಕೃಷ್ಣನ್, ಕೆ ಎಸ್  
1898-1961. ಭಾರತದ ಅತ್ಯಂತ ಶ್ರೇಷ್ಠ ವಿe್ಞÁನಿಗಳಲ್ಲಿ ಒಬ್ಬರಾದ ಕರಿಯಮಾಣಿಕ್ಯಂ ಶ್ರೀನಿವಾಸ ಕೃಷ್ಣನ್ ಅವರು ದೇಶದ ವೈe್ಞÁನಿಕ ಮುನ್ನಡೆಗೆ ಸಲ್ಲಿಸಿರುವ ಸೇವೆ ಅಮೂಲ್ಯವಾದುದು. ತಮಿಳುನಾಡಿನ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಇವರು ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಖಗೋಳಶಾಸ್ತ್ರ ಇತ್ಯಾದಿ ವಿಷಯಗಳ ಬಗ್ಗೆ ಅಧ್ಯಯನ ಮಾಡಿದರಲ್ಲದೆ, ದಿನಕ್ಕೆ ಎರಡು ಮೂರು ತಾಳೆಗರಿಗಳ ಮೇಲೆ ವಿಷಯ ಸಂಗ್ರಹಣೆ ಮಾಡಿ ಒಂದು ದೊಡ್ಡ ಪುಸ್ತಕವನ್ನೇ ರಚಿಸಿದರು. ಮುಂದೆ ಪ್ರೊಫೆಸರ್ ರಾಮನ್ ರವರಿಂದ ಆಕರ್ಷಿತರಾಗಿ ಕಲ್ಕತ್ತಾ ವಿಶ್ವವಿದ್ಯಾಲಯದ ವೈe್ಞÁನಿಕ ಕಾಲೇಜಿನಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದು ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ ಸಂಸ್ಥೆಯಲ್ಲಿ ದ್ರವಗಳ ಬೆಳಕಿನ ಚದುರುವಿಕೆ ಹಾಗೂ ಅನಿಲಾಣುಗಳು ಮತ್ತು ಹರಳುಗಳಲ್ಲಿ ಕಾಂತತೆಯ ಅಸಮಾನತೆಯ ಬಗ್ಗೆ ಆಳವಾದ ಸಂಶೋಧನೆ ನಡೆಸಿದರು. ವೈe್ಞÁನಿಕ ವಿಷಯಗಳಲ್ಲಷ್ಟೇ ಅಲ್ಲದೆ ತಮಿಳು ಸಂಸ್ಕøತ ಹಾಗೂ ಆಂಗ್ಲಸಾಹಿತ್ಯದಲ್ಲಿ ಅಭಿರುಚಿಯಿದ್ದ ಕೃಷ್ಣನ್ ದೇಶದ ಆಗು ಹೋಗುಗಳಲ್ಲಿ ಮಾತ್ರವಲ್ಲ ಕ್ರೀಡೆಗಳಲ್ಲೂ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಡಾಕಾ ಅಲಹಾಬಾದ್ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ತಮ್ಮ ಸಹೋದ್ಯೋಗಿಗಳೊಡನೆ ಹರಳುಗಳ ಕಾಂತತೆ ಮತ್ತು ಕಾಂತರಸಾಯನಶಾಸ್ತ್ತ್ರಗಳ ಬೆಳವಣಿಗೆಗೆ ಬುನಾದಿಯನ್ನು ಹಾಕಿದರು. ಸ್ವಾತಂತ್ರ್ಯಾನಂತರ ರಾಷ್ಟ್ರೀಯ ಭೌತಶಾಸ್ತ್ರ ಪ್ರಯೋಗಾಲಯದ ಡೈರೆಕ್ಟರ್ ಆಗಿ ಚುನಾಯಿತರಾಗಿ ತಮ್ಮ ಅಂತ್ಯ ಕಾಲದವರೆಗೂ ಸೇವೆ ಸಲ್ಲಿಸಿದರು. ಈ ವಿe್ಞÁನಿ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಮಂಡಲಿ, ಕೈಗಾರಿಕಾ ಮತ್ತು ವೈe್ಞÁನಿಕ ಸಂಶೋಧನಾ ಮಂಡಲಿ, ಯುನೆಸ್ಕೋ ಸಂಸ್ಥೆಯ ಸೈಂಟಿಫಿಕ್ ಅಡ್ವೈಸಿ ಕಮಿಟಿ ಇತ್ಯಾದಿ ವೈಜ್ಞಾನಿ ಸಂಘಸಂಸ್ಥೆಗಳಲ್ಲಿ ಪ್ರಮುಖವಾದ ಸ್ಥಾನಗಳಿಗೆ ಚುನಾಯಿತರಾಗಿದ್ದರು. ಎಫ್.ಆರ್.ಎಸ್. (1940) ಪದ್ಮಭೂಷಣ (1954), ರಾಷ್ಟ್ರೀಯ ಪ್ರಾಧ್ಯಾಪಕ ಮೊದಲಾದ ಅನೇಕ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದರು. ಇವರ ಅತ್ಯಂತ ಸರಳ ಸ್ವಭಾವ ಬಹು ಜನಪ್ರಿಯರಾಗಿದ್ದರು. ಮೇಲೆ ಹೇಳಿದ ವಿಷಯಗಳಷ್ಟೇ ಅಲ್ಲದೆ ತರಂಗ ಯಂತ್ರವಿe್ಞÁನ (ವೇವ್ ಮೆಕ್ಯಾನಿಕ್ಸ್,) ಸಂಖ್ಯಾಕಲನೀಯ ಉಷ್ಣಗತಿವಿe್ಞÁನ (ಸ್ಟ್ಯಾಟಿಸ್ಟಿಕಲ್ ಥರ್ಮೋಡೈನಮಿಕ್ಸ್) ಹಾಗೂ ಘನಸ್ಥಿತಿಯ ಬಗ್ಗೆ ಸಂಶೋಧನೆ ನಡೆಸಿ 130ಕ್ಕೂ ಹೆಚ್ಚು ಪ್ರಬಂಧಗಳನ್ನು ಅನೇಕ ಪ್ರತಿಷ್ಠಿತ ಸಂಶೋಧನ ಪತ್ರಿಕೆಗಳಲ್ಲಿ ಪ್ರಕಟಿಸಿದ ಮಹಾವಿe್ಞÁನಿ ಇವರು.								
	(ಎನ್.ವಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ